ಕೋಲ ತುದಿಯ ಕೋಡಗದಂತೆ ನೇಣ ತುದಿಯ ಬೊಂಬೆಯಂತೆ ಆಡಿದೆನಯ್ಯಾ ನೀನಾಡಿಸಿದಂತೆ ಆನು ನುಡಿದೆನಯ್ಯಾ ನೀ ನುಡಿಸಿದಂತೆ ಆನು ಇದ್ದೆನಯ್ಯಾ ನೀನು ಇರಿಸಿದಂತೆ ಜಗದ ಯಂತ್ರವಾಹಕ ಚೆನ್ನಮಲ್ಲಿಕಾರ್ಜುನ ಸಾಕೆಂಬನ್ನಕ್ಕ.