Pages(key to [[Help:Page Status{{!}}Page Status]])
ಕ್ರಿಯೆ ಜಡವೆಂಬರು ಜ್ಞಾನ ಅಜಡವೆಂಬರು ಅದೆಂತಯ್ಯಾ ? ನೀತಿಯ ಹೇಳಿದುದು ಜಡವೆ ? ಕಷ್ಟವಿಲ್ಲದೆ ಬಂದಂತೆ ಬೊಗಳಿ ಭೋಗಿಸಿ ಭವಕ್ಕೆ ಹೋಗುವುದು ಅಜಡವೆ ? ಕ್ರಿಯಾ-ಜ್ಞಾನವೆಂಬ ಉಭಯ ಶಬ್ದಾರ್ಥವನರಿಯದೆ ಕಂಡ ಕಂಡ ಹಾಗೆ ಬೊಗಳುವ ಹೊಲೆಮಾದಿಗರನು ಏನೆಂಬೆ ಕೂಡಲಚೆನ್ನಸಂಗಮದೇವಾ ?