ಕ್ಷೀರದ ರುಚಿಯ ಹಂಸಬಲ್ಲುದಲ್ಲದೆ
ನೀರೊಳಗಿರ್ಪ ನೀರಗೋಳಿ ಎತ್ತಬಲ್ಲುದಯ್ಯಾ ? ಕಬ್ಬಿನ ಸ್ವಾದವ ಮದಗಜಬಲ್ಲುದಲ್ಲದೆ
ಸೋಗೆಯ ತಿಂಬ ಕುರಿ ಎತ್ತಬಲ್ಲುದಯ್ಯಾ ? ಪುಷ್ಪದ ಪರಿಮಳವ ಭೃಂಗಬಲ್ಲುದಲ್ಲದೆ
ಮರಕಡಿಯುವ ಗುಂಗೆಯಹುಳ ಎತ್ತ ಬಲ್ಲುದಯ್ಯಾ ? ಆದಿಸ್ಥಳಕುಳದ ನಿರ್ಣಯವ ಅನಾದಿಶರಣ ಬಲ್ಲನಲ್ಲದೆ ಈ ಲೋಕದ ಗಾದೆಯ ಮನುಜರು ಎತ್ತ ಬಲ್ಲರಯ್ಯಾ ಅಖಂಡೇಶ್ವರಾ ?