ಗಿರಿಯ ಶಿಖರದ ಮೇಲೆ ಕುಳಿತುಕೊಂಡು ಜಡೆಯನೇರಿಸಿಕೊಂಡು ಹುತ್ತೇರಿ ಹಾವು ಸುತ್ತಿರ್ದಡೇನಯ್ಯಾ ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗದೊಡನೊಡನೆ ಸವೆದ ಪಾಷಾಣ ! ನಮ್ಮ ಕೂಡಲಸಂಗನ ಶರಣರ ಪ್ರಸಾದಜೀವಿಗಳಲ್ಲದವರು ಏಸು ಕಾಲವಿರ್ದಡೇನು ಅದರಂತು ಕಾಣಿರಣ್ಣಾ.