ಗುದ ಲಿಂಗ ನಾಭಿಮಂಡಲದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಗುದ ಲಿಂಗ ನಾಭಿಮಂಡಲದಿಂದ ಮೇಲೆ ಷಡಂಗುಲವ ಹತ್ತಿ
ಅಧೋಮುಖಕಮಲವನು ಊಧ್ರ್ವಮುಖಕ್ಕೆ ತಂದು
`ನಾಭ್ಯಾ ಆಸೀದಂತರಿಕ್ಷಂ ಎಂಬ ಅಂತರಿಕ್ಷದೊಳಗಿಪ್ಪ ಚಿದಾತ್ಮನಪ್ಪಂತಹ ಆದಿತ್ಯನ ಕಿರಣಂಗು ಹೋಗಿ ತಾಗಲ್ಕೆ
ಆ ಪದ್ಮ ವಿಕಸಿತವಾಗಿ
ಅನೇಕ ರತ್ನಸಂಕೀರ್ಣವಪ್ಪಂತಹ ಹೃದಯದೀಪ್ತಿಯ ಪ್ರಕಾಶವ ಕಂಡು ಶಿವಜ್ಞಾನದೊಳಿಡಿದು
ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿ ಎಂಬೀ ಅಷ್ಟಾಂಗಯೋಗದೊಳ್ವಿಡಿದು ನಿಟಿಲತಟ ಭ್ರೂಮಧ್ಯದ ಮೇಲಣ ಉಭಯದಳಕಮಲದ ಮೇಲೆ ಇಪ್ಪ ಜೀವ ಪರಮನ ಭೇದವೆಂತಿರ್ದುದೆಂದಡೆ; ಜೀವಾತ್ಮಪರಮಾತ್ಮೇತಿ ಭೇದಂ ತ್ಯಕ್ತ್ವಾ ಪರಾಂ ಗತಿಂ ಅಭ್ಯೇತಿ ಪುರುಷಃ ಸಾಕ್ಷೀ ಕ್ಷೇತ್ರಜ್ಞೋ[s]ಕ್ಷಯಮಶ್ನುತೇ ಎಂದುದಾಗಿ ಜೀವಪರಮರಿಬ್ಬರನು ಏಕಾರ್ಥವ ಮಾಡಲ್ಕೆ
ದ್ವಾಸುಪರ್ಣಾ ಸಯುಜಾ ಸಾಖಾಯಾ ಸಮಾನಂ ವೃಕ್ಷಂ ಪರಿಷಸ್ವಜಾತೇ ತಯೋರನ್ಯಃ ಪಿಪ್ಪಲಂ ಸ್ವಾದ್ವತ್ತಿ ಅನಶ್ನನ್ನನ್ಯೋ[s]ಭಿಚಾಕಶೀತಿ ಎಂದುದಾಗಿ ಬ್ರಹ್ಮನಾ?ದ ಮೇಲೆ ಪ್ರಯೋಗಿಸಿ ಕವಾಟದ್ವಾರವ ತೆಗೆದು ತೆರಹಿಲ್ಲದ ಬಯಲು-ಕೂಡಲಚೆನ್ನಸಂಗಾ ನಿಮ್ಮ ಶರಣ