ಗುರುಪ್ರಸಾದಿಯಾದ
ಬಳಿಕ
ವಾತ
ಪಿತ್ತ
ಶ್ಲೇಷ್ಮವೆಂಬ
ತ್ರಿದೋಷವಿಲ್ಲದಿರಬೇಕು.
ಲಿಂಗಪ್ರಸಾದಿಯಾದ
ಬಳಿಕ
ಶೀತೋಷ್ಣಾದಿಗಳ
ಭಯವಿಲ್ಲದಿರಬೇಕು.
ಜಂಗಮಪ್ರಸಾದಿಯಾದ
ಬಳಿಕ
ಆದ್ಥಿ
ವ್ಯಾದ್ಥಿಯಿಲ್ಲದಿರಬೇಕು.
ಮಹಾಪ್ರಸಾದಿಯಾದ
ಬಳಿಕ
ಮರಣವಿಲ್ಲದಿರಬೇಕು.
ತಾಪತ್ರಯ
ತನುವ
ಪೀಡಿಸುವನ್ನಕ್ಕರ
ಪ್ರಸಾದಿ
ಪ್ರಸಾದಿಯೆಂದೇನೋ
ಜಡರುಗಳಿರ?
ಕೆಂಡವ
ಇರುಹೆ
ಮುತ್ತಬಲ್ಲುದೆ?
ನೊಣ
ಹಾದರೆ
ಮದಸೊಕ್ಕಿದಾನೆಯ
ಬರಿ
ಮುರಿಯಬಲ್ಲುದೆ?
ಪ್ರಸಾದಿಯ
ಪ್ರಳಯಬಾಧೆಗಳು
ಬಾದ್ಥಿಸಬಲ್ಲವೇ?
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭುವೇ.