ಗುರುವಪ್ಪುದರಿದು ಶಿಷ್ಯನಪ್ಪುದರಿದು ಗುರುಶಿಷ್ಯಸಂಬಂಧವಾರಿಗೆಯೂ ಅಳವಡದಾಗಿ. ಗುರುವಾದಾತ ಸೊನ್ನಗಾರನಾಗಬೇಕು. ಶಿಷ್ಯನಾದಾತ ಬೆವಹಾರಿಯಾಗಬೇಕು. ಇದು ಕಾರಣ-ಕೂಡಲಚೆನ್ನಸಂಗಯ್ಯಾ ಇಂತಹ ಗುರುಶಿಷ್ಯಸಂಬಂಧವಪೂರ್ವ