ಗುರುವಿಂದಾಯಿತ್ತೆಂಬೆನೆ ? ಗುರುವಿಂದಾಗದು. ಲಿಂಗದಿಂದಾಯಿತ್ತೆಂಬೆನೆ ? ಲಿಂಗದಿಂದಾಗದು. ಜಂಗಮದಿಂದಾಯಿತ್ತೆಂಬೆನೆ ? ಜಂಗಮದಿಂದಾಗದು. ಪಾದೋದಕದಿಂದಾಯಿತ್ತೆಂಬೆನೆ ? ಪಾದೋದಕದಿಂದಾಗದು. ಪ್ರಸಾದದಿಂದಾಯಿತ್ತೆಂಬೆನೆ ? ಪ್ರಸಾದದಿಂದಾಗದು. ತನ್ನಿಂದ ಅಹುದು ತನ್ನಿಂದ ಹೋಹುದು ಕಾಣಾ ಕೂಡಲಚೆನ್ನಸಂಗಮದೇವಾ.