ಗುರುವಿಡಿದ ಅರಿವು ಅರಿವಲ್ಲ ಲಿಂಗವಿಡಿದ ಅರಿವು ಅರಿವಲ್ಲ. ಇಲ್ಲದ ಗುರು ಇಲ್ಲದ ಲಿಂಗ ! ಕಲ್ಪಿತಕ್ಕೆ ಅರಿವಹುದೆ ? ತನ್ನಿಂದ ತಾನರಿವುದೆ ಅರಿವು ಗುಹೇಶ್ವರಾ.