ಗುರುವೆ ಹೆಂಡತಿಯಾಗಿ ಹೆಂಡತಿಯೆ ತಾಯಾಗಿ; ತಾಯೆ ಹೆಂಡತಿಯಾಗಿ; ಶಿಷ್ಯನೆ ಗಂಡನಾಗಿ_ ಏನೆಂದು ಹೇಳುವೆ ಏನೆಂದುಪಮಿಸುವೆ ಕೂಡಲಚೆನ್ನಸಂಗಯ್ಯಾ ಇಹಪರವಿಲ್ಲವಾಗಿ.