ಗ್ರಾಮದ ಪಥಗತಿಯನರಿಯರು ಗ್ರಾಮಕ್ಕೆ ಗುರುವಾವುದೆಂದರಿಯರು ಗ್ರಾಮದ ಕರಣವಿಡಿದಲ್ಲಿ ನಿಚ್ಚಾಟವಾವುದೆಂದರಿಯರು. ಇವನರಿದು ಮರೆದು ನಿಂದರೆ ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು.