ಘಟಪಟದ ಭಿತ್ತಿಯಂತೆ ಭಿನ್ನವೆಂಬ ಹಾಂಗೆ ಇಹುದು. ತಿಳಿದು ನೋಡಿದಡೆ ಭಿನ್ನವುಂಟೆ ? ಘಟದೊಳಗಣ ಬಯಲು ಪಟದೊಳಗಣ ನೂಲು; ಭಿತ್ತಿಯ ಮೃತ್ತಿಕೆಯಂತೆ ಒಂದಲ್ಲದೆ ಎರಡಿಲ್ಲ. ದೇಹಿಗಳೊಳಗೆ ಗುಹೇಶ್ವರನಲ್ಲದೆ ಮತ್ತಾರೂ ಇಲ್ಲ.