Pages (key to Page Status)
ಚಿದಾನಂದಸುಖಮಯವಪ್ಪ ವಸ್ತುವಿಂಗೆ ಇಂದ್ರಿಯಾನಂದ ಹೊದ್ದಿದಡೆ ನಾ ನೊಂದೆನಯ್ಯ. ನಾನು ಬೆಂದೆನಯ್ಯ. ನಾನು ಚಿದಾನಂದಸ್ವರೂಪನು. ಈ ಅನಾನಂದವಿದೇನೋ? ಇದು ಕಾರಣ ಅನಾಯತವಪ್ಪ ಇಂದ್ರಿಯವಿಕಾರವ ಮಾಣಿಸಯ್ಯ ಎನ್ನ ತಂದೆ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.