ಚಿನ್ನದಿಂದಲಾದ ಹಲವು ಬಂಗಾರವನಳಿದು ಕರಗಿಸಿದರೆ ಮುನ್ನಿನ ಚಿನ್ನವೆ ಆದಂತೆ ಉದಕದಿಂದಾದ ವಾರಿಕಲ್ಲು ಕರಗಿ ಮುನ್ನಿನ ಉದಕವೆ ಆದಂತೆ ಚಿನ್ಮಯ ವಸ್ತುವಿನಿಂದುದಯಿಸಿದ ಚಿತ್‍ಸ್ವರೂಪನಾದ ಶರಣನು ಆ ಚಿನ್ಮಯ ಪರವಸ್ತುವನೆ ಬೆರಸಿ ಪರಮ ಶಿವಯೋಗಿಯಾದನು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.