ಜಂಗಮಕ್ಕೊಂದನಿಕ್ಕಿ ತಾನೊಂದನುಂಬನೆ ಪ್ರಸಾದಿ? ಜಂಗಮ ಉಂಡರೆ ಮನದಲ್ಲಿ ಮರುಗುವನೆ ಪ್ರಸಾದಿ? ಜಂಗಮಕ್ಕೆ ತಳಿಗೂಳ ತಳಿದು ತಾ ಗಂಗಳ ತುಂಬಿ ಒಟ್ಟಿಸಿಕೊಂಡು ಕೊಂಬನೆ ಪ್ರಸಾದಿ? ಪ್ರಸಾದಿಯಂತೆ ಪ್ರಪಂಚುಂಟೆ? ಕಕ್ಕುಲತೆಯಮಾಡಿ ಕೊಂಡನಾದರೆ ನಾಯಮಾಂಸ ತಿಂದ ಸಮಾನ ಕಾಣಿರೋ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.