ಜಂಗಮದ ಪಾದತೀರ್ಥ ಪ್ರಸಾದವ ಲಿಂಗಕ್ಕೆ ಕೊಟ್ಟು ಕೊಳಬಾರದು ಎಂಬಾತನು ಲಿಂಗದ್ರೋಹಿ ಜಂಗಮದ್ರೋಹಿ ಪಾದೋದಕ ಪ್ರಸಾದದ್ರೋಹಿಯಾದ ಚಾಂಡಾಲರ ಮುಖವ ನೋಡಲಾಗದು. ನೋಡಿದಡೆ ನಾಯಕನರಕ ತಪ್ಪದು ಕೂಡಲಚೆನ್ನಸಂಗಮದೇವಾ