ಜಂಗಮಪಾದವು ಪರಮಪವಿತ್ರವಾಗಿರ್ಪುದಯ್ಯಾ ಜಂಗಮಪಾದವು ಜಗದ್ಭರಿತವಾಗಿರ್ಪುದಯ್ಯಾ ಜಂಗಮಪಾದವು ಆದಿಯಿಂದತ್ತತ್ತಲಾಗಿರ್ಪುದಯ್ಯಾ `ಚರಣಂ ಪವಿತ್ರಂ ವಿತತಂ ಪುರಾಣಂ್ಡ ಎಂದುದಾಗಿ ಜಂಗಮದ ಶ್ರೀಪಾದವ ಭಕ್ತಿಯಿಂದ ಪಿಡಿದ ಸದ್ಭಕ್ತನು ದುರಿತಾಂಬುಧಿಯಿಂದ ದೂರವಾಗಿರ್ಪನಯ್ಯಾ ಕೂಡಲಚೆನ್ನಸಂಗಮದೇವಾ