ಜಂಗಮವೇನು ಸಂಗಿಯೇ? ಭೂಭಾರಿಯೇ?


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಜಂಗಮವೇನು
ಸಂಗಿಯೇ? ಭೂಭಾರಿಯೇ? ಸೀಮನೇ? ಉಪಾಧಿಕನೇ?
ದೇಹಿಯೇ? ಮಲಿನನೇ? ಅನಿತ್ಯನೇ?
ಅಲ್ಲ
ಕಾಣಿರಯ್ಯ.ನಿಸ್ಸಂಗಿ ನಿರಾಭಾರಿ ನಿಸ್ಸೀಮ ನಿರುಪಾಧಿಕ; ನಿರ್ದೇಹಿಯಯ್ಯ.
ನಿರ್ಮಲ ನಿತ್ಯ ನಿರುಪಮ ನಿರ್ಗುಣ ನಿರಾಧಾರ ನಿರಾಲಂಬ;
ಸರ್ವಾಧಾರ ಸದಾನಂದಿಯೆ ಜಂಗಮದೇವನಯ್ಯ.

ಜಂಗಮೆ
ತಾನಾಗದೆ
ಜಂಗಮ
ಜಂಗಮವೆದು
ನುಡಿದುಕೊಂಡು
ನಡೆದರೆ
ನಾಚದವರನೇನೆಂಬೆನಯ್ಯಾ?
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭುವೇ.