ಜಂಗಮವ ಜರಿದು ಲಿಂಗವ ಮ(ರೆದು) ಅಂಗಹೀನನಾದ ಬಳಿಕ ಸಂಗಸಂಯೋಗ ಎಲ್ಲಿಯದೋ ಅಯ್ಯಾ ? (ಜಂಗ)ಮಮೋಹಿ ಜರಿಯಬಲ್ಲನೆ ? ಲಿಂಗಮೋಹಿ ಮರೆಯಬಲ್ಲನೆ ? ಜಾತಿಕಾರ ಭಂಡರ ಮೆಚ್ಚುವನೆ ನಮ್ಮ ಜಾತ ಅಜಾತ ಕೂಡಲಚೆನ್ನಸಂಗಮದೇವಯ್ಯ.