ಜನಪದ ಕನಸುಗಳಲ್ಲಿ ಗಾದೆ ಮತ್ತು ನಂಬಿಕೆ

ಕನಸಿನ ಗಾದೆಗಳು

ಸಂಪಾದಿಸಿ
  • ೧.ಅಂಬಲಿಗೆ ಗತಿಯಿಲ್ಲ ಅಂಬಾರಿ ಕನಸು
  • ೨.ಕನಸಿನ ಸುಖ ನೆನಸಿದರ ಬರಿ ದು:ಖ
  • ೩.ಇರುಳು ಕಮಸಿನಲಿ ಕಂಡ ಭತ್ತಕ್ಕೆ ಹಗಲು ಗೋಣಿ ಹಾಸಿದ ಹಾಗೆ
  • ೪.ಕನಸಿನಲಿ ತಾಳಿ ಕಟ್ಟಿ ಬೆಳಗಾದ್ಮೇಲೆ ಹೆಂಡ್ತಿ ಹುಡುಕಿದನಂತೆ
  • ೫.ಸತ್ತ ಗಂಡ ಸ್ವಪ್ನಕ್ಕೆ ಬಂದ್ರೆ ಹಿಟ್ಟು ಬಟ್ಟೆ ಕೊಟ್ಟಾನಾ
  • ೬.ಕೋಳಿ ಗೂಡೊಳ್ಗೆ ಕೂತ್ಗೊಂಡು ದೇವಲೋಕದ ಕನಸ ಕಾಣ್ತಿತಂತೆ
  • ೭.ಹಗಲುಗನಸಿನ ಸವಿ ಇರುಳುಗನಸಿಗೆ ಬಂದಿತೆ
  • ೮.ಮೂಕನ ಕನಸು(ಸ್ವಪ್ನ) ಹೇಳಲಿಕ್ಕೆ ಬಾರದು
  • ೯.ಕನಸಿನ ಗಂಡನನ್ನು ಲೆಕ್ಕಕ್ಕೆ ಸೇರಿಸಿಕೊಂಡ ಹಾಗೆ
  • ೧೦.ಕನಸ್ನಲ್ಲಿ ತಿನ್ನೋನಿಗೆ ಮೊಸರನ್ನಕ್ಕೆ ಕೊರತೆಯೇ!

ಕನಸಿನ ಬಗೆಗಿನ ನಂಬಿಕೆಗಳು

ಸಂಪಾದಿಸಿ
  • ೧.ಮೊದಲ ಜಾವದ ಕನಸಿನ ಫಲಾಫಲಗಳು ಒಂದು ಸಂವ್ಸರದೊಳಗೆ ಫಲಿಸುತ್ತವೆ.
  • ೨.ಎರಡನೆ ಜಾವದ ಕನಸಿನ ಫಲಾಫಲಗಳು ಎಂಟು ತಿಂಗಳೊಳಗೆ ಫಲಕಾರಿಯಾಗುತ್ತವೆ.
  • ೩.ಮೂರನೆ ಜಾವದ ಕನಸಿನ ಫಲಾಫಲಗಳು ಮೂರು ತಿಂಗಳೊಳಗೆ ಫಲಿಸುತ್ತವೆ.
  • ೪.ನಸುಕಿನ ಜಾವದ ಕನಸಿನ ಫಲಾಫಲಗಳು ಹತ್ತು ದಿನಗಳಲ್ಲಿ ಫಲಿಸುತ್ತವೆ.
  • ೫.ಆರರ ಹೊತ್ತಿನ ಕನಸಿನ ಫಲಾಫಲಗಳು ಆ ದಿನದಲ್ಲಿಯೇ ಫಲ ನೀಡುತ್ತದೆ.
  • ೬.ದಕ್ಷಿಣದಿಕ್ಕಿಗೆ ಪ್ರಯಾಣ ಮಾಡುವಂತಹ ಕನಸು ಕಂಡರೆ ಆರು ತಿಂಗಳೊಳಗೆ ಸಾವು ಸಂಭವಿಸುತ್ತದೆ.
  • ೭.ತಲೆ ಮೇಲೆ ಕೊಂಬು ಬಂದಂತೆ ಕನಸು ಕಂಡರೆ ಅಧಿಕಾರ ,ಗೌರವ ಲಭಿಸುತ್ತದೆ.
  • ೮.ಬಸುರಿ ಹೆಂಗಸರು ಕನಸಿನಲ್ಲಿ ತುಂಬು ಗರ್ಭಿಣಿಯೊಂದಿಗೆ ಮಾತಾಡಿದರೆ ಅವಳಿ-ಜವಳಿ ಮಕ್ಕಳಾಗುತ್ತವೆ.
  • ೯.ಕನಸಿನಲ್ಲಿ ಮನೆ ಮುಂಭಾಗ ಕಾರು, ಬಸ್ಸು, ಲಾರಿ, ಜೀಪು ಮುಂತಾದ ವಾಹನಗಳು ಬಂದು ನಿಂತರೆ ಆ ಮನೆಯಲ್ಲಿ ಸಾವಾಗುತ್ತದೆ.
  • ೧೦.ಕನಸಿನಲ್ಲಿ ಮಾಂಸದ ಊಟವನ್ನು ಮಾಡಿದರೆ ಹತ್ತಿರ ಸಂಬಂಧಿಕರು ಸಾಯುತ್ತಾರೆ.