ಜಲದೊಳಗಿರ್ದ ಕಿಚ್ಚು ಜಲವ ಸುಡದೆ ಜಲವು ತಾನಾಗಿಯೆ ಇದ್ದಿತ್ತು ನೋಡಾ ನೆಲೆಯನರಿದು ನೋಡಿಹೆನೆಂದಡೆ ಅದು ಜಲವು ತಾನಲ್ಲ ಕುಲದೊಳಗಿರ್ದು ಕುಲವ ಬೆರಸದೆ ನೆಲೆಗಟ್ಟುನಿಂದುದನಾರು ಬಲ್ಲರೊ?ಹೊರಗೊಳಗೆ ತಾನಾಗಿರ್ದು_ಮತ್ತೆ ತಲೆದೋರದಿಪ್ಪುದು ಗುಹೇಶ್ವರಾ ನಿಮ್ಮ ನಿಲವು ನೋಡಾ.