ಜ್ಯೋತಿಯ ತಮವೆಡೆಗೊಡಂತೆ ಚಂದ್ರಮನ ರಾಹುಎಡೆಗೊಂಡಂತೆ ನಿಧಾನವ ಸರ್ಪನೆಡೆಗೊಂಡಂತೆ ಅಂಬುದ್ಥಿಯ ಅನಲನೆಡೆಗೊಂಡಂತೆ ಮನವ ಮಾಯವಡೆಗೊಂಡು ನಿಮ್ಮ ನೆನಹ ನೆಲೆಗೊಳಲೀಯದೆ ಮರಣಕ್ಕೊಳಗುಮಾಡುತ್ತಿಪ್ಪುದಯ್ಯ. ಈ ತಮವ ಪರಿಹರಿಸಿ ಎನ್ನನುಳುಹಿಕೊಳ್ಳಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.