ತನಗೆ ತಾನೆ ಹುಟ್ಟಿದನಾಗಿ ತಾನೆ ಸ್ಥಾವರವಾದ ಆ ಲಿಂಗವು ತನ್ನಲ್ಲಿರ್ದ ರುಚಿಯ ಅವ್ಯಕ್ತಕ್ರೀಯಿಂದ ಮನವೆ ಬಾಯಾಗಿ ಉಂಬ ಲಿಂಗವು ಇತರರ ಸುಖವ ಬಲ್ಲುದೆ ಕೂಡಲಚೆನ್ನಸಂಗಮದೇವಾ ?