ತನತನಗೆ ಕುಳ್ಳಿರ್ದು ಮನಸಿಗೆ



Pages   (key to Page Status)   


ತನತನಗೆ ಕುಳ್ಳಿರ್ದು ಮನಸಿಗೆ ಬಂದಂತೆ ಘನಲಿಂಗದ ವಾರ್ತೆಯ ಗಳಹುತಿಪ್ಪರು ನೋಡಾ ! ಗುರುಕಾರುಣ್ಯವ ಹಡೆಯದೆ
ಸ್ವರಬಿಂದುಗಳ ತಡೆಯದೆ ಹರನ ಶರಣರ ಮುಂದೆ ಹಿರಿದು ಮಾತನಾಡುತಿಪ್ಪರು ನೋಡಾ ! ಇರಿಯದೆ ಮೆರೆವರು
ಅರಿಯದೆ ಉಳಿವರು ಕೂಡಲಚೆನ್ನಸಂಗಯ್ಯನಲ್ಲಿ ಜನಜಂಗುಳಿಗಳು