Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ತನುಧನಾದಿಗಳ ಮೋಹ ಮಾಣದೆ
ತನ್ನಲ್ಲಿ ನಿಜದ ನೆನಹು ನೆಲೆಗೊಳ್ಳದೆ
ಎನಗೆ ಕುಲಗೋತ್ರಗಳಿಲ್ಲವೆಂದು ಗಳಹುತ್ತ ವಿಧಿನಿಷೇಧವನಾರಯ್ಯದೆ
ಕಂಡಕಂಡಂತೆ ಕುಣಿವ ಮಂದ ಮನುಜರು ಕೆಟ್ಟು ಭ್ರಷ್ಟರಪ್ಪರಯ್ಯಾ. ಅದೇತಕೆಂದಡೆ:ಬೊಮ್ಮವಾನೆಂಬ ಸುಜ್ಞಾನ ನೆಲೆಗೊಳ್ಳದಾಗಿ. ಅರಸಿನ ಹೆಸರಿನ ಅನಾಮಿಕಂಗೆ
ಅರಸೊತ್ತಿಗೆಯ ಸಿರಿ ದೊರೆಯದಂತೆ ಮಾಯಾ ಜಡಧಿಯಲ್ಲಿ ಮುಳುಗಿದ ಮರುಳುಮಾನವಂಗೆ ಪರಮಸುಖವೆಂತು ದೊರೆವುದಯ್ಯಾ ಕೂಡಲಚೆನ್ನಸಂಗಮದೇವಾ ?