Pages(key to [[Help:Page Status{{!}}Page Status]])
ತನುವಿಡಿದಿಹುದು ಪ್ರಕೃತಿ ಪ್ರಕೃತಿವಿಡಿದಿಹುದು ಪ್ರಾಣ ಪ್ರಾಣವಿಡಿದಿಹುದು ಜ್ಞಾನ ಜ್ಞಾನವಿಡಿದಿಹುದು ಗುರು. ಇಂತೀ ಗುರುಲಿಂಗಜಂಗಮಪ್ರಸಾದವ ಸಗುಣವೆಂದು ಹಿಡಿದು ನಿರ್ಗುಣವೆಂದು ಕಂಡ ಸಂದೇಹಿ ವ್ರತಗೇಡಿಗಳನೇನೆಂಬೆ ಅಂತವರ ಮುಖವ ತೋರದಿರು ಕೂಡಲಸಂಗಮದೇವಾ.