ತನುವಿನೊಳಗಿದ್ದು ತನುವ ಗೆದ್ದಳು ಮನದೊಳಗಿದ್ದು ಮನವ ಗೆದ್ದಳು ವಿಷಯದೊಳಗಿದ್ದು ವಿಷಯಂಗಳ ಗೆದ್ದಳು ಅಂಗಸುಖವ ತೊರೆದು ಭವವ ಗೆದ್ದಳು ಕೂಡಲಚೆನ್ನಸಂಗಯ್ಯನ ಹೃದಯಕಮಲವ ಬಗಿದು ಹೊಕ್ಕು ನಿಜಪದವನೈದಿದ ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ ಎಂಬೆನು.