ತನುವಿನ ಸೂತಕ ಮನದ ಸಂಚಲ ಜೀವನ ಕಳವಳ; ಹಿಂಗಿದುವಯ್ಯಾ ಗುರುಕರುಣವ ಪಡೆದೆನಾಗಿ ಕೂಡಲಚೆನ್ನಸಂಗಮದೇವಾ ಎನ್ನ ಭಾವಭ್ರಾಂತಿಯಳಿಯಿತ್ತು ನೀವೆಂದರಿದೆನಾಗಿ !