ತನುವಿರಹಿತ ಪ್ರಾಣವಿಲ್ಲ ಗುರುವಿರಹಿತ ಲಿಂಗವಿಲ್ಲ ಕಂಗಳಸಂಗ ವಿರಹಿತವಾಗಿ ನೋಡಲಿಲ್ಲ. ಈ ಭೇದಸ್ಥಾನವನರಿಯಬೇಕು ಕೂಡಲಚೆನ್ನಸಂಗಯ್ಯನನರಿವರೆ.