ತನುವಿಲ್ಲದಂದಿನ ಮನವಿಲ್ಲದಂದಿನ ಕಾಲಕರ್ಮಂಗಳಿಲ್ಲದಂದಿನ ಕರಣಂಗಳಿಲ್ಲದಂದಿನ ಇಂದ್ರಿಯಂಗಳ ವ್ಯವಹಾರದ ಸುಖವಿಲ್ಲದಂದಿನ ಇವೇನುಯೇನೂ ಇಲ್ಲದಂದು ನೀನು ಶೂನ್ಯನಾಗಿರ್ದೆಯಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.