ತನುವೆಂಬ ಗುಡಿಯೊಳಗೆ ಮನವೆಂಬ ಸಿಂಹಾಸನವನಿಕ್ಕಿ ಘನಮಹಾಲಿಂಗವ ಮೂರ್ತಿಗೊಳಿಸಿ ಸಕಲ ಕರಣಂಗಳಿಂದೆ ಪೂಜೋಪಚಾರವ ಶೃಂಗರಿಸಬಲ್ಲರೆ ಘನಕ್ಕೆ ಘನಮಹಿಮನೆಂಬೆನಯ್ಯಾ ಅಖಂಡೇಶ್ವರಾ.