ತನುವ ಕೊಟ್ಟು ತನು ಬಯಲಾಯಿತ್ತು ಮನವ ಕೊಟ್ಟು ಮನ ಬಯಲಾಯಿತ್ತು ಧನವ ಕೊಟ್ಟು ಧನ ಬಯಲಾಯಿತ್ತು ಈ ತ್ರಿವಿಧವನು ಕೊಟ್ಟು ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ ಬಯಲಸಮಾಧಿಯಾಯಿತ್ತು.