ತನುವ ಬಂದು ಅಲೆವರಯ್ಯಾ ಎನ್ನ ಮನವ ಬಂದು ನೋಡುವರಯ್ಯಾ ಎನ್ನ ಧನವ ಬಂದು ಸೂರೆಗೊಂಬರಯ್ಯಾ ಜಂಗಮವನವರತ. ಕೂಡಲಸಂಗಮದೇವಾ ನಿಮ್ಮ ಬಯ್ಕೆಯ ಭಂಡಾರಕ್ಕೆ ನಾನು ಶುದ್ಧನಯ್ಯಾ.