ತನು ದಾಸೋಹ
ಅವಯವಂಗಳೆಲ್ಲವು ಆಚಾರ
ಮನ ಪ್ರಾಣವೆಂಬವೆಲ್ಲವು ಅರಿವಿನ ಮೂರ್ತಿ ನೋಡಾ. ಒಳಗು ಹೊರಗು
ಹೊರಗು ಒಳಗು ಎಂಬುದನರಿಯದ ಸತ್ಯ ಸದಾಚಾರಿ ನೀನು. ನಿನ್ನಳವ ಅರಿಯಲು ಆನು ಏತರವನಯ್ಯಾ. ಅಂತರಂಗದಲ್ಲಿ ಅರಿವು ಉಂಟಾದಡೇನು ? ಎನ್ನ ಕಾಯದಲ್ಲಿ ಭಕ್ತಿ ಸ್ವಾಯತವಿಲ್ಲ
ಆಚಾರವೆಂಬುದು ಅತ್ತತ್ತಲಿಲ್ಲ. ಸರ್ವಾಚಾರಸಂಪನ್ನ [ನೀನು]
ನಿನ್ನಳವ ನಾನೆತ್ತ ಬಲ್ಲೆನಯ್ಯಾ ? ಗುಹೇಶ್ವರ ಸಾಕ್ಷಿಯಾಗಿ
ನಿಮ್ಮ ಮಹಾಮನೆಯ ಕಾವಲು ಬಂಟ ನಾನೆಂಬುದ ನಿಮ್ಮ ಪ್ರಮಥರೆಲ್ಲಾ ಬಲ್ಲರು ಸಂಗನಬಸವಣ್ಣಾ.