ತನು ನಿಮ್ಮದೆಂಬೆ ಮನ ನಿಮ್ಮದೆಂಬೆ ಧನ ನಿಮ್ಮದೆಂಬೆ ಮತ್ತೆಯೂ ವಂಚನೆ ಮಾಣದಯ್ಯಾ. ಲಿಂಗ ಜಂಗಮವೆಂಬೆ ಜಂಗಮ ಲಿಂಗವೆಂಬೆ ಮತ್ತೆಯೂ ವಂಚನೆ ಮಾಣದಯ್ಯಾ. ಒಡಲೊಡವೆ ಹಡೆದರ್ಥ ನಿಮ್ಮದೆಂದರಿಯದೆ ಕೆಮ್ಮನೆ ಕೆಟ್ಟೆ ಕೂಡಲಸಂಗಮದೇವಾ. 309