ತನು ಮೀಸಲಾಗಿ ಮನ ಮೀಸಲಾಗಿ ಭಾವವಚ್ಚುಗೊಂಡಿಪ್ಪುದವ್ವಾ. ಅಚ್ಚುಗನ ಸ್ನೇಹ ನಿಚ್ಚಟದ ಮೆಚ್ಚುಗೆ ಬೆಚ್ಚು ಬೇರಾಗದ ಭಾವವಾಗೆ ಚೆನ್ನಮಲ್ಲಿಕಾರ್ಜುನಯ್ಯ ಒಳಗೆ ಗಟ್ಟಿಗೊಂಡಿಪ್ಪನವ್ವಾ.