Pages   (key to Page Status)   


ತನು ಸೋಂಕಿ ತನು ನಷ್ಟವಾಯಿತ್ತು
ಮನ ಸೋಂಕಿ ಮನ ನಷ್ಟವಾಯಿತ್ತು
(ಧನ ಸೋಂಕಿ ಧನ ನಷ್ಟವಾಯಿತ್ತು) ಭಾವ ಸೋಂಕಿ ಭಾವ ನಷ್ಟವಾಯಿತ್ತು. ಇದು ಕಾರಣ ಕೂಡಲಚೆನ್ನಸಂಗಯ್ಯಾ
ಲಿಂಗ ಸೋಂಕಿ ಶರಣನ ಸಂದು ನಷ್ಟವಾಯಿತ್ತು
(ನಿಮ್ಮೊಳಗೇಕಾರ್ಥವಾಯಿತ್ತು).