ತನ್ನ ಲಿಂಗಕ್ಕೆ ಬಾರದ ರುಚಿಯ ಜಂಗಮಕ್ಕೆ ಸಲಿಸಿ ಕೈಯ ನೀಡಿ ಪ್ರಸಾದವನಿಕ್ಕೆಂಬಿರಿ ಅದು ಪ್ರಸಾದವಲ್ಲ ಸಿಂಗಿ ಕಾಳಕೂಟ ವಿಷವು ಕೇಳಿರಣ್ಣಾ. ಆ ಪ್ರಸಾದ ಪದವೆಂಬಿರಿ ಆ ಪ್ರಸಾದ ಕಿಲ್ಬಿಷವೆಂಬೆ ಕೂಡಲಚೆನ್ನಸಂಗಮದೇವಾ.