ತನ್ನ ಲಿಂಗಕ್ಕೆ ಮಾಡಿದ ಬೋನವ ಜಂಗಮಕ್ಕೆ ನೀಡಬಾರದೆಂಬುದನೇಕ ನರಕ ! ತನ್ನ ಲಿಂಗವಾರೋಗಿಸಿ ಮಿಕ್ಕ ಪ್ರಸಾದವ ಜಂಗಮಕ್ಕೆ ನೀಡುವುದನೇಕ ನಾಯಕನರಕ. ಆ ಜಂಗಮವಾರೋಗಿಸಿ ಮಿಕ್ಕ ಪ್ರಸಾದ ಎನ್ನ ಲಿಂಗಕ್ಕೆ ಬೋನವಾಯಿತ್ತು ಎನಗೆ ಪ್ರಸಾದವಾಯಿತ್ತು. ಕೂಡಲಚೆನ್ನಸಂಗಯ್ಯಾ ಎನಗೆಯೂ ನಿನಗೆಯೂ ಜಂಗಮಪ್ರಸಾದ ಪ್ರಾಣವಾಯಿತ್ತು.