ತಪವೆಂಬುದು ತಗಹು ನೇಮವೆಂಬುದು ಬಂಧನ ಶೀಲವೆಂಬುದು ಸೂತಕ ಭಾಷೆಯೆಂಬುದು ಪ್ರಾಣ ಘಾತಕ._ ಇಂತೀ ಚತುರ್ವಿಧದೊಳಗಲ್ಲ ಗುಹೇಶ್ವರಾ ನಿಮ್ಮ ಶರಣರು ಅಗ್ರಗಣ್ಯರು.