ತಲೆಯಲ್ಲಿ ಹುಟ್ಟಿದ ಕಣ್ಣು ನೆಲದೊಡೆಯನ ನುಂಗಿತ್ತು ನೋಡಾ. ತಲೆಯಳಿಯಿತ್ತು:ನೆಲ ಬೆಂದಿತ್ತು. ತಲೆಯೊಳಗಣ ಕಣ್ಣು ತ್ರಿಜಗದಾದ್ಥಿಪತಿಯ ತಾನೆಂದು ನೋಡುತ್ತ ನೋಡುತ್ತ ಅಡಗಲು ನೆಲದೊಡೆಯ ಸತ್ತುದ ಕಂಡು ನಿರ್ವಯಲ ಸಮಾದ್ಥಿಸ್ಥಲವಾಗಿ ಕುರುಹಳಿದ ಲಿಂಗೈಕ್ಯನಯೇನೆಂದುಪಮಿಸುವೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.