ತಲೆಯ ಮೇಲೆ ತಲೆಯಿದ್ದಿತ್ತಲ್ಲಾ ! ಆ ತಲೆಯಾತಲೆ ನುಂಗಿತ್ತಲ್ಲಾ ! ಸತ್ತು ಹಾಲ ಸವಿಯ ಬಲ್ಲಡೆ ರಥದ ಕೀಲ ಬಲ್ಲಡೆ_ಅದು ಯೋಗ ! ಶಿಶು ಕಂಡ ಕನಸಿನಲುಳ್ಳ ತೃಪ್ತಿ ನಿನ್ನಲ್ಲಿ ಉಂಟೆ ಗುಹೇಶ್ವರಾ?