ತಾನೊಬ್ಬನು; ಕೊಲುವರು ಹಲಬರು.


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ತಾನೊಬ್ಬನು; ಕೊಲುವರು ಹಲಬರು. ಹಲವು ದಿಕ್ಕಿನ ಕಿಚ್ಚೆದ್ದು ಸುಡುವಲ್ಲಿ ನೆಲನ ಮರೆಹೊಗಲು ಜಲಮಯವಾಯಿತ್ತು ನೋಡಾ. ಜಲದೊಳಗಾಳುವನ ಜಲಂಧರ ರಕ್ಕಸ ಭಕ್ಷಿಸುತ್ತಿರಲು ಆಕಟಕಟಾ ಶಿವನೇಯೆನಲು ಮುಕ್ಕಣ್ಣ ತೆರೆದನು; ರಕ್ಕಸನ ಸೊಕ್ಕು ಮುರಿಯಿತ್ತು
ಕೊಲುವರು ಹಲಬರು ನೆಲನ ಬಿಟ್ಟೋಡಿದರು. ಹಲವು ದಿಕ್ಕಿನ ಕಿಚ್ಚು ಕೆಟ್ಟಿತ್ತು. ನೆಲ ಕರಗಿತ್ತು; ಜಲವರತಿತ್ತು. ಜಲಧಿ ದಾಂಟಿ
ಅಮೃತ ಸಾಗರವ ಬೆರಸಿ ಅನುಪಮಸುಖಿಯಾದೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.