ತಾಪತ್ರಯವಿಲ್ಲದವ ವ್ಯಾಪ್ತಿಯನರಿದವ ಇರುಳು ಹಗಲೆಂದು ಮನದಲ್ಲಿ ತಾಳದವ ತಾಳೋಷ್ಠಸಂಪುಟಕ್ಕೆ ಬಾರದವ ಭವಚ್ಛೇದ ಕಾಮಭಂಜನ ಕಾಯವಿಲ್ಲದವ ಕಾಲನ ಗೆದ್ದವ ಮಾಯವ ತೊರೆದವ ಮತ್ತೊಂದನರಿಯದವ ನಮ್ಮ ಕೂಡಚೆನ್ನಸಂಗನನರಿದು ಸುಖಿಯಾದವ.