Pages   (key to Page Status)   


ತಾ ನಡೆವಡೆ ನಡೆಗೆಟ್ಟ ನಡೆಯ ನಡೆವುದಯ್ಯಾ. ತಾ ನುಡಿವಡೆ ನುಡಿಗೆಟ್ಟ ನುಡಿಯ ನುಡಿವುದಯ್ಯಾ. ರೂಹಿಲ್ಲದ ಸಂಗವ ಮಾಡಬೇಕು
ಭವವಿಲ್ಲದ ಭಕ್ತಿಯ ಮಾಡಬೇಕು. ತಾನಾವನೆಂದರಿಯದಂತಿಹುದು
ಗುಹೇಶ್ವರಾ.