Pages(key to [[Help:Page Status{{!}}Page Status]])
ತಾ ಹೆಳವ; ಎಡಹೊತ್ತಿನ ಪಯಣ; ಒಡ್ಡಿದ ಮಳೆಯ ಮುಗಿಲು ಸೋರುವ ಮನೆ ನೆಲದ ಹಾಸಿಕೆ ಕೊರಳಲ್ಲಿ ಮೂರು ಮಣ್ಣ ಮಣಿ ಹಿಂದೆ ಕಲ್ಲೊರಳು ಮೇಣದೊನಕೆ ಹಳೆ ಅಕ್ಕಿ ಹೊಸ ಭಾಂಡ_ ಹಸಿಯ ಬೆರಣಿಯ ತಾಳಿಯನಿಕ್ಕಿ ಕಿಚ್ಚಿಲ್ಲದೆ ಒಲೆಯನುರುಹಿ ಓಗರವನಡಲು ಗುಹೇಶ್ವರಲಿಂಗವು ಒಡೆದ ತಳಿಗೆಯ [ಲಿ] ಆರೋಗಣೆಯ ಮಾಡಿದನು.