ತುಂಟ ಬಂಟಂಗೆ ನಂಟರು ನಾಲ್ವರು ನೋಡಾ. ಬಂಟರು ಎಂಟುಮಂದಿಗಳಾಗಿಪ್ಪರಯ್ಯ. ನಂಟರು ನಾಲ್ವರ ಕೊಂದು ಬಂಟರು ಎಂಟಮಂದಿಯ ಬಿಟ್ಟಲ್ಲದೆ ತುಂಟತನ ಬಿಡದು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.