ತೆರೆಯ ಮರೆಯ ಕುರುಹೆಂಬುದೇನೊ ಒಳಗೆ ಲಿಂಗವನನುವಿಡಿದ ಬಳಿಕ ? ಪೂಜಿಸುವ ಭಕ್ತನಾರೊ ? ಪೂಜಿಸಿಕೊಂಬ ದೇವನಾರೊ ? ಮುಂದು ಹಿಂದು ಹಿಂದು ಮುಂದಾಯಿತ್ತು ಗುಹೇಶ್ವರಾ ನಾನು ನೀನು ನೀನು ನಾನಾದ ಬಳಿಕ ಮತ್ತೇನುಂಟು ಹೇಳಾ ?