ತ್ರಿವಿಧನಿರ್ವಚಂಕನೆ ಭಕ್ತ, ತ್ರಿವಿಧವಿರಾಗಿಯೆ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ತ್ರಿವಿಧನಿರ್ವಚಂಕನೆ ಭಕ್ತ
ತ್ರಿವಿಧವಿರಾಗಿಯೆ ಜಂಗಮ. ಭಾಷೆಗೆ ತಪ್ಪದಿರ್ದಡೆ ಮಾಹೇಶ್ವರ ಪ್ರಸಾದಿ
ವೇಷವ ತೋರದಿರ್ದಡೆ ಜಂಗಮ ಇಂದ್ರಿಯ ವಿಕಾರವಳಿದಡೆ ಪ್ರಸಾದಿ
ಮನವಳಿದಡೆ ಜಂಗಮ. ಪ್ರಾಣಸಂಚಾರಗೆಟ್ಟಡೆ ಪ್ರಾಣಲಿಂಗಿ
ಜೀವಭಾವಗೆಟ್ಟಡೆ ಜಂಗಮ. ಅರಿವಿನ ಭ್ರಾಂತಳಿದರೆ ಶರಣ
ಬೋಧೆಗೆಟ್ಟಡೆ ಜಂಗಮ. ತಾನಿಲ್ಲದಿರ್ದಡೆ ಐಕ್ಯ
ಏನೂ ಇಲ್ಲದಿರ್ದಡೆ ಜಂಗಮ_ ಇಂತೀ ಷಟ್‍ಸ್ಥಲದಲ್ಲಿ ನಿಜವನರಿದು ನೆಲೆಗೊಂಡಾತನೆ ಶ್ರೀಗುರು. ಇಂತಲ್ಲದೆ ನುಡಿಯಲ್ಲಿ ಅದ್ವೈತವನಾಡಿ ನಡೆಯಲ್ಲಿ ಅನಂಗವ ನಡೆವರ ಕಂಡಡೆ ಎನ್ನ ಮನ ನಾಚಿತ್ತು ಕೂಡಲಚೆನ್ನಸಂಗಮದೇವಾ