ದಾಸನಂತೆ ತವನಿದ್ಥಿಯ ಬೇಡುವನಲ್ಲ ಚೋಳನಂತೆ ಹೊನ್ನಮಳೆಯ ಕರೆಸೆಂಬವನಲ್ಲ ಅಂಜದಿರು ಅಂಜದಿರು ಅವರಂದದವ ನಾನಲ್ಲ. ಎನ್ನ ತಂದೆ ಕೂಡಲಸಂಗಮದೇವಾ ಸದ್ಭಕ್ತಿಯನೆ ಕರುಣಿಸೆನಗೆ.